Live Events

The best real-time content distribution platform

samachara

ಸಿದ್ದು '12ನೇ ಮುಂಗಡ ಪತ್ರ'- 2017-18

ದೇಶದಲ್ಲಿ 'ಆರ್ಥಿಕ ತುರ್ತು ಪರಿಸ್ಥಿತಿ'ಯಂತಹ ವಾತಾವರಣವನ್ನು ಸೃಷ್ಟಿಸಿದ್ದ 'ಅನಾಣ್ಯೀಕರಣ' ಪ್ರಕ್ರಿಯೆ ನಡೆದ ನಂತರ ಸಿದ್ದರಾಮಯ್ಯ ಮಂಡಿಸುತ್ತಿರುವ ಮೊದಲ ಬಜೆಟ್ ಇದು. ಸಂಪ್ರದಾಯಕ್ಕೆ ವಿರುದ್ಧವಾಗಿ ಏಪ್ರಿಲ್ 1ರಂದೇ ಕೇಂದ್ರ ಸರಕಾರ ಬಜೆಟ್ ಘೋಷಣೆ ಮಾಡಿ ಮುಗಿಸಿದೆ. ಆದರೆ, ಸಿಎಂ ಸಿದ್ದರಾಮಯ್ಯ ಸಂಪ್ರದಾಯಂತೆಯೇ ಆರ್ಥಿಕ ವರ್ಷದ ಕೊನೆಯ ತಿಂಗಳ ಮಧ್ಯದಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ಅವರದ್ದೇ ಆದ ಹಿನ್ನೆಲೆಗಳ ಕಾರಣಕ್ಕೆ ಅವರು ಮಂಡಿಸುತ್ತಿರುವ 'ಕರ್ನಾಟಕ ರಾಜ್ಯ ಆಯವ್ಯಯ- 2017-18' ಕುತೂಹಲಕ್ಕೆ ಕಾರಣವಾಗಿದೆ. ಆದಾಯ ಕುಸಿತ ಕಂಡಿರುವ ಈ ಹೊತ್ತಿನಲ್ಲಿ, ವಿರೋಧ ಪಕ್ಷಗಳು ಪಕ್ಷ ಬೆಳೆಸುವ ನಿಟ್ಟಿನಲ್ಲಿ ಬ್ಯುಸಿ ಆಗಿರುವ ಈ ಸಂದರ್ಭದಲ್ಲಿ, ಅದಕ್ಕಿಂತ ಹೆಚ್ಚಾಗಿ ದೊಡ್ಡ ಸಂಖ್ಯೆ ಪ್ರಜ್ಞಾವಂತ ಜನ 'ಬಜೆಟ್‌'ನಿಂದ ವಿಮುಖವಾಗಿರುವ ಈ ದಿನಗಳಲ್ಲಿ ಮಂಡಿಸುವ ಆಯವ್ಯಯ ಭವಿಷ್ಯವನ್ನು ಹೇಗೆ ನಿರ್ಧರಿಸುತ್ತದೆ ಎಂಬುದನ್ನು ಈ ಬಜೆಟ್ ಸುಳಿವು ನೀಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ 'ಬಜೆಟ್' ವಿಸಿಟ್ ಒಂದಷ್ಟು ಮಾಹಿತಿಯನ್ನು ನೀಡುತ್ತಿದೆ. ಓದುಗರಿಗೆ ಸ್ವಾಗತ...

  • 0
  • 0